header ads

2020ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ

 2020ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಘೋಷಣೆಯಾಗಿದೆ.

1955ರಲ್ಲಿ  ಕರ್ನಾಟಕ ನಾಟಕ ಅಕಾಡೆಮಿಯು ಅಂದಿನ ಮೈಸೂರು ಸರ್ಕಾರದ ಆಡಳಿತದಡಿ  ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು.ಮತ್ತು ಅದರ ಅಧ್ಯಕ್ಷರು ಶ್ರೀ ಜಯಚಾಮರಾಜ ಒಡೆಯರ್ ಆಗಿದ್ದರು.ತದನಂತರ ಈ ಅಕಾಡೆಮಿಯು ವಿದ್ಯಾಇಲಾಖೆಯ ಆಡಳಿತಕ್ಕೆ ಒಳಪಟ್ಟಿತು.ಸಂಬಂಧಪಟ್ಟ ವಿದ್ಯಾಮಂತ್ರಿಗಳೇ ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸಿದರು. 1978ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿಯು ಕರ್ನಾಟಕ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ವತಂತ್ರಅಕಾಡೆಮಿಯಾಗಿ ರೂಪುಗೊಂಡು ನಾಟಕ ಕ್ಷೇತ್ರಕ್ಕೆ ವಿಶಿಷ್ಟ ಆಯಾಮ ನೀಡಿ,ಕಲಾ ಪ್ರೋತ್ಸಾಹ, ರಂಗಭೂಮಿಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದೆ. 

ಪ್ರಸ್ತುತ ಅಧ್ಯಕ್ಷರು.

 ಪ್ರೊ. ಭೀಮಸೇನ.ಆರ್

ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ

ಡಾ.ಶೈಲಜಾ ಎ.ಸಿ

ರಿಜಿಸ್ಟ್ರಾರ್.ಕರ್ನಾಟಕ ನಾಟಕ ಅಕಾಡೆಮಿ

ಜೀವಮಾನದ ರಂಗಗೌರವ ಪ್ರಶಸ್ತಿಗೆ ಒಬ್ಬರು ಮತ್ತು ವಾರ್ಷಿಕ ಪ್ರಶಸ್ತಿಗೆ 25 ಮಂದಿ ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ.


ಜೀವಮಾನದ ರಂಗಗೌರವ ಪ್ರಶಸ್ತಿ

1. ಶ್ರೀ ಎಸ್.ಎನ್.ಸೇತೂರಾಂ, ಬೆಂಗಳೂರು


 ವಾರ್ಷಿಕ ರಂಗಪ್ರಶಸ್ತಿ

1. ಸಂತೋಷ ಕುಮಾರ ಕುಸನೂರು, ಕಲಬುರ್ಗಿ

2. ಎಂ.ಇಸ್ಮಾಯಿಲ್ ಸಾಬ್, ರಾಯಚೂರು

3. ಭರಮಪ್ಪ ಜುಟ್ಲದ, ಕೊಪ್ಪಳ

4. ಮಾ.ಭ.ಸೋಮಣ್ಣ, ಹೊಸಪೇಟೆ, ಬಳ್ಳಾರಿ

5. ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಬಳ್ಳಾರಿ

6. ಗುರುಬಸಪ್ಪ ಕಲ್ಲಪ್ಪ ಸಜ್ಜನ, ವಿಜಯಪುರ

7. ಹಣಮವ್ವ ಗಾಜರ ಕುಳಲಿ, ಬಾಗಲಕೋಟೆ

8. ಪಿ ಢಗಳಚಂದ್ರ ಪವಾರ, ಬಾಗಲಕೋಟೆ

9. ಉಮಾದೇವಿ ಹಿರೇಮಠ, ಗದಗ

10. ಬಸವರಾಜ ಬ ಕಡ್ಲೆಣ್ಣನವರ, ಧಾರವಾಡ

11. ಐರಣಿ ಬಸವರಾಜ, ದಾವಣಗೆರೆ

12. ನೂರಜಹಾನ ಗೊರಜಿನಾಳ್, ಚಿತ್ರದುರ್ಗ

13. ಮಹಾವೀರ ಜೈನ್, ಚಿಕ್ಕಮಗಳೂರು

14. ಅಶ್ವತ್ಥ ಕದಂಬ, ಮೈಸೂರು

15. ಚಂದ್ರಶೇಖರಯ್ಯ ಎಂ.ಆರ್., ಕೊಡಗು

16. ಧನ್ಯಕುಮಾರ, ಮಂಡ್ಯ

17. ವೆಂಕಟರಮಣಸ್ವಾಮಿ, ಚಾಮರಾಜನಗರ

18. ಶ್ರೀನಿವಾಸ ಪ್ರಭು ಉಪ್ಪುಂದ, ಉಡುಪಿ

19. ರೋಹಿಣಿ ಜಗರಾಂ, ಮಂಗಳೂರು

20. ಕೆ.ಎನ್.ವಾಸುದೇವ ಮೂರ್ತಿ, ಬೆಂಗಳೂರು ಗ್ರಾಮಾಂತರ

21. ವಿ.ಲಕ್ಷ್ಮೀಪತಿ, ಬೆಂಗಳೂರು ನಗರ

22. ಎಂ.ಎಸ್.ವಿದ್ಯಾ, ಬೆಂಗಳೂರು ನಗರ

23. ಮಂಜುಳಾ ಬಿ.ಎನ್. ಬೆಂಗಳೂರು ನಗರ

24. ಗೀತಾ ಸುರತ್ಕಲ್, ಬೆಂಗಳೂರು ನಗರ

25. ಬಾಬು ಹಿರಣ್ಣಯ್ಯ, ಬೆಂಗಳೂರು ನಗರ

ಕರ್ನಾಟಕ ನಾಟಕ ಅಕಾಡೆಮಿಯ ವೆಬ್‌ಸೈಟ್ 

http://karnatakanatakaacademy.com/?introduction