header ads

Karnataka PSI Requirement 2021 - ಕರ್ನಾಟಕ ಪೋಲಿಸ್ ಸಬ್-ಇನ್ಸ್ಪೆಕ್ಟರ್ ( ಸಿವಿಲ್) ಹುದ್ದೆಗಳ ನೇಮಕಾತಿ

 ಕರ್ನಾಟಕ ಪೋಲಿಸ್ ಸಬ್-ಇನ್ಸ್ಪೆಕ್ಟರ್ ( ಸಿವಿಲ್) ಹುದ್ದೆಗಳ ನೇಮಕಾತಿ 2021

     ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಪೋಲಿಸ್ ಸಬ್-ಇನ್ಸ್ಪೆಕ್ಟರ್ ( ಸಿವಿಲ್) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಆಸಕ್ತರು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು 

  ಪೋಲಿಸ್ ಸಬ್-ಇನ್ಸ್ಪೆಕ್ಟರ್ ( ಸಿವಿಲ್)

ಒಟ್ಟು ಹುದ್ದೆಗಳು - 

          376+26 

ಅರ್ಜಿ ಶುಲ್ಕ - 

          ಅರ್ಜಿಶುಲ್ಕವನ್ನು ನೋಡುವುದಾದರೆ ಸಾಮಾನ್ಯ ವರ್ಗ,ಪ್ರವರ್ಗ ೨(ಎ),೨(ಬಿ),೩(ಎ),೩(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.ಮತ್ತು ಪರಿಶಿಷ್ಟ .ಜಾತಿ,ಪರಿಶಿಷ್ಟ .ಪಂಗಡ,ಪ್ರವರ್ಗ-೧ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.ಈ ಅರ್ಜಿ ಶುಲ್ಕವನ್ನು ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಅಧಿಕೃತ ಶಾಖೆಗಳಲ್ಲಿ ಅಥವಾ ಆನ್‌ಲೈನ್ ಮುಖಾಂತರವೂ ಸಹ ಪಾವತಿಸಬಹುದಾಗಿದೆ.

ವಯೋಮಿತಿ -

          ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 21 ವರ್ಷ ವಯಸ್ಸಾಗಿರಬೇಕು.ಮತ್ತು ಗರಿಷ್ಠ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳು ಅಭ್ಯರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 32 ವರ್ಷಗಳು ಮತ್ತು ಇತರೆ ಅಭ್ಯರ್ಥಿಗಳಿಗೆ 30 ವರ್ಷಗಳು.ಸೇವಾನಿರತ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು.ಇತರೆ ಅಭ್ಯರ್ಥಿಗಳಿಗೆ 35  ವರ್ಷಗಳು.

ವಿದ್ಯಾರ್ಹತೆ - 

         ಯು.ಜಿ.ಸಿ ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಹೊಂದಿರಬೇಕು.

ವಾರ್ಷಿಕ ವೇತನ - 37,900 ರೂ ಗಳಿಂದ 70,850 ರೂಪಾಯಿಗಳು.

ಆಯ್ಕೆ ವಿಧಾನ - 

          ಅಭ್ಯರ್ಥಿಗಳನ್ನು  4 ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ.

         ಸಹಿಷ್ಣುತೆ ಪರೀಕ್ಷೆ -

         1600ಮೀಟರ್ ಒಟ - 7 ನಿಮಿಷಕ್ಕಿಂತ ಮೀರದಂತೆ ಪೂರ್ಣಗೊಳಿಸಬೇಕು.
         ಉದ್ದ ಜಿಗಿತ       - 3.8 ಮೀಟರ್ಗಿಂತ ಕಡಿಮೆ ಇಲ್ಲದಂತೆ ಪಾಸಾಗಬೇಕು.
         ( 3 ಅವಕಾಶಗಳು ಮಾತ್ರ )
             OR
         ಎತ್ತರ ಜಿಗಿತ      -  1.20 ಮೀಟರ್ ಗಿಂತ ಕಡಿಮೆ ಇಲ್ಲದಂತೆ ಪೂರ್ಣಗೊಳಿಸಬೇಕು.
         ( 3 ಅವಕಾಶಗಳು ಮಾತ್ರ )
         ಗುಂಡು ಜಿಗಿತ -  5.60 ಮೀಟರ್ ಗಿಂತ ಕಡಿಮೆ ಇಲ್ಲದಂತೆ ಪಾಸಾಗಬೇಕು
         ( 3 ಅವಕಾಶಗಳು ಮಾತ್ರ )

ಮಹಿಳಾ,ಸೇವಾನಿರತ ಮತ್ತುಮಾಜಿ ಸೈನಿಕ ಅಭ್ಯರ್ಥಿಗಳಿಗೆ

           400 ಮೀಟರ್ ಓಟ - 2 ನಿಮಿಷಗಳು ಮೀರದಂತೆ ಪೂರ್ಣಗೊಳಿಸಬೇಕು.
           ಉದ್ದ ಜಿಗಿತ    - 2.50 ಮೀಟರ್ ಗಿಂತ ಕಡಿಮೆ ಇಲ್ಲದಂತೆ ಪಾಸಾಗಬೇಕು.
           ( 3 ಅವಕಾಶಗಳು ಮಾತ್ರ )
           OR
           ಎತ್ತರ ಜಿಗಿತ    -  0.90 ಮೀಟರ್ ಗಿಂತ ಕಡಿಮೆ ಇಲ್ಲದಂತೆ ಪೂರ್ಣಗೊಳಿಸಬೇಕು.
           ಗುಂಡು ಎಸೆತ - 3.75 ಮೀಟರ್ ಗಿಂತ ಕಡಿಮೆ ಇಲ್ಲದಂತೆ ಪಾಸಾಗಬೇಕು.
           ( 3 ಅವಕಾಶಗಳು ಮಾತ್ರ )

ದೇಹದಾರ್ಢ್ಯತೆ ಪರೀಕ್ಷೆ ( ಸಹಿಷ್ಣುತೆ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ಮಾತ್ರ )

ಎತ್ತರ - ಕನಿಷ್ಠ 168 ಸೆಂ.ಮೀ.
ಎದೆ ಸುತ್ತಳತೆ - 86 ಸೆಂ.ಮೀ ( ಪೂರ್ತಿ ವಿಸ್ತರಿಸಿದಾಗ ) ಕನಿಷ್ಠ ವಿಸ್ತರಣೆ 5 ಸೆಂ.ಮೀ.
ಮಹಿಳಾ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ
ಕನಿಷ್ಠ ಎತ್ತರ - 157 ಸೆಂ.ಮೀ
ಕನಿಷ್ಠ ತೂಕ - 45 ಕೆ.ಜಿ.

ಲಿಖಿತ ಪರೀಕ್ಷೆ - 

         ಅಭ್ಯರ್ಥಿಗಳು ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ.
ಲಿಖಿತ ಪರೀಕ್ಷೆಯು 2 ಪತ್ರಿಕೆಯನ್ನು ಒಳಗೊಂಡಿರುತ್ತದೆ.
ಪತ್ರಿಕೆ - 1
      ಪ್ರಬಂಧ ಬರಹ,ಸಾರಾಂಶ ಬರಹ,ಭಾಷಾಂತರ ಪ್ರಶ್ನೆಗಳು ಈ ಪ್ರಶ್ನೆ ಪತ್ರಿಕೆಯಲ್ಲಿ ಕಾಣಬಹುದು.
ಪತ್ರಿಕೆ - 2
      ಈ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಇರುತ್ತದೆ.150 ಅಂಕಗಳಿಗೆ ವಸ್ತುನಿಷ್ಠ ಮಾದರಿಯಲ್ಲಿ ಇದ್ದು,ಮಲ್ಟಿಪಲ್ ಚಾಯ್ಸ್ ಉತ್ತರಗಳ ಲಿಖಿತ ಪರೀಕ್ಷೆ ಆಗಿರುತ್ತದೆ.
      ಹಾಗೂ ವೈದ್ಯಕೀಯ ಪರೀಕ್ಷೆಯ ಮುಖಾಂತರ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕವನ್ನು ನೋಡುವುದಾದರೆ,
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 01.04.2021 ಬೆಳಿಗ್ಗೆ 10 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 03.05.2021 ಸಂಜೆ 06 ಗಂಟೆಯವರೆಗೆ.