header ads

ಪಿ.ಡಿ.ಓ ಪರೀಕ್ಷೆಯ ಮಾದರಿ ಪ್ರಶ್ನೆಗಳು । PDO Exam model questions in kannada

 ಪಿ.ಡಿ.ಓ ಪರೀಕ್ಷೆಯ ಮಾದರಿ ಪ್ರಶ್ನೆಗಳು

      ( PDO Exam model questions )

           ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ( PDO ) ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೋತ್ತರಗಳು ಈ ಕೆಳಗಿನಂತಿವೆ.

ಕೇಂದ್ರ ಹಣಕಾಸು ಆಯೋಗದ ಸ್ಥಾಪನೆಗೆ ಅನುವು ಮಾಡಿದ ಸಂವಿಧಾನದ ವಿಧಿ ಯಾವುದು ?
» 250
» 260
» 280
» 254
ಉತ್ತರ : 280

ಮೊದಲ ಕೇಂದ್ರ ಹಣಕಾಸು ಆಯೋಗವು ಸ್ಥಾಪನೆಯಾದ ವರ್ಷ ಯಾವುದು ?
» 1950
» 1951 
» 1952
» 1954
ಉತ್ತರ : 1951

14 ನೇ ಹಣಕಾಸು ಆಯೋಗದ ಮುಖ್ಯಸ್ಥರು ಯಾರು ?
» ಡಾ॥ ವೈ.ವಿ.ರೆಡ್ಡಿ 
» ಡಾ॥ವಿಜಯ್ ಎಲ್ ಕೇಳ್ಕರ್
» ಸಿ.ರಂಗರಾಜನ್
» ಕೆ.ಸಿ.ಪಂಥ್
ಉತ್ತರ : ಡಾ॥ ವೈ.ವಿ.ರೆಡ್ಡಿ

ಗ್ರಾಮ ಸ್ವರಾಜ್ ನ ಮೊದಲ ಹಂತ ಆರಂಭವಾಗಿದ್ದು ಯಾವಾಗ ?
» 2006-07
» 2007-08
» 2008-09
» 2005-06
ಉತ್ತರ : 2006-07

ಗ್ರಾಮ ಸ್ವರಾಜ್ ಯೋಜನೆಯನ್ನುಞಾವ ಸಮಿತಿಯ ಶಿಫಾರಸ್ಸಿನ ಅನ್ವಯ ಕೈಗೊಳ್ಳಲಾಗಿದೆ ?
» ರಮೇಶ್ ಕುಮಾರ್ ಸಮಿತಿ
» ವಿಜಯ್ ಖೇಳ್ಕರ್ ಸಮಿತಿ
» ನಂಜಯ್ಯಮಠ ಸಮಿತಿ
» ಡಾ॥ಡಿ.ಎಂ.ನಂಜುಂಡಪ್ಪ ಸಮಿತಿ
ಉತ್ತರ : ಡಾ॥ಡಿ.ಎಂ.ನಂಜುಂಡಪ್ಪ ಸಮಿತಿ

ಸುವರ್ಣ ಗ್ರಾಮೋದಯ ಯೋಜನೆಯನ್ನು ಜಾರಿಗೆ ತಂದ ವರ್ಷ ಯಾವುದು ?
» 2005
» 2003
» 2007
» 2006 
ಉತ್ತರ : 2006

ಡೆಪ್ಯುಟಿ ಕಮಿಷನರ್ ಎಂದರೆ ಯಾರು ?
» ಜಿಲ್ಲಾ ಡೆಪ್ಯುಟಿ ಕಮಿಷನರ್ /ಜಿಲ್ಲೆಯ ಜಿಲ್ಲಾಧಿಕಾರಿ 
» ಜಿಲ್ಲಾ ಪಂಚಾಯತ್ ಕಮಿಷನರ್
» ಜಿಲ್ಲಾ ಸ್ಥಳೀಯ ಸಂಸ್ಥೆ ಕಮಿಷನರ್
» ಪ್ರಾದೇಶಿಕ ಕಮಿಷನರ್
ಉತ್ತರ : ಜಿಲ್ಲಾ ಡೆಪ್ಯುಟಿ ಕಮಿಷನರ್ /ಜಿಲ್ಲೆಯ ಜಿಲ್ಲಾಧಿಕಾರಿ

ಈ ಕೆಳಗಿನ ಯಾವ ಅವಧಿಯ ನಂತರ ಗ್ರಾಮ ಪಂಚಾಯಿತಿ ಸಭೆಯನ್ನು ನಡೆಸತಕ್ಕದ್ದಲ್ಲ?
» ಸಂಜೆ 4 ಗಂಟೆ
» ಸಂಜೆ 5 ಗಂಟೆ
» ಸಂಜೆ 6 ಗಂಟೆ
» ಸಂಜೆ 7 ಗಂಟೆ 
ಉತ್ತರ : ಸಂಜೆ 7 ಗಂಟೆ

ಹಣಕಾಸಿನ ಕಾರ್ಯನೀತಿ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿಗೆ ಈ ಕೆಳಗಿನ ಯಾರು ಸಲಹೆ ನೀಡತಕ್ಕದ್ದು?
» ಮುಖ್ಯಲೆಕ್ಕಾಧಿಕಾರಿ 
» ಯೋಜನಾ ಅಧಿಕಾರಿ
» ಉಪ ಕಾರ್ಯದರ್ಶಿ
» ಮುಖ್ಯಕಾರ್ಯನಿರ್ವಾಹಣಾಧಿಕಾರಿ
ಉತ್ತರ : ಮುಖ್ಯಲೆಕ್ಕಾಧಿಕಾರಿ

ಹೊಸದಾಗಿ ಸ್ಥಾಪನೆಯಾದ ಗ್ರಾಮಪಂಚಾಯತಿಗೆ ಅಥವಾ ಆಕಸ್ಮಿಕವಾಗಿ  ಖಾಲಿ ಸ್ಥಾನ ಉಂಟಾದಾಗಲೆಲ್ಲ ಅಧ್ಯಕ್ಷ / ಉಪಾಧ್ಯಕ್ಷರ ಚುನಾವಣೆಯನ್ನು ಈ ಕೆಳಗಿನ ಯಾರು ನಡೆಸುತ್ತಾರೆ ?
» ಗ್ರಾಮ ಪಂಚಾಯತಿ ಕಾರ್ಯದರ್ಶಿ
» ತಹಶಿಲ್ದಾರರು/ ಡಿ.ಸಿ ರವರು ಗೊತ್ತುಪಡಿಸಿದ ತಹಶಿಲ್ದಾರ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿ 
» ಡೆಪ್ಯುಟಿ ಕಮಿಷನರ್
» ರಾಜ್ಯ ಚುನಾವಣಾ ಆಯೋಗ
ಉತ್ತರ : ತಹಶಿಲ್ದಾರರು/ ಡಿ.ಸಿ ರವರು ಗೊತ್ತುಪಡಿಸಿದ ತಹಶಿಲ್ದಾರ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿ

ದೀನದಯಾಳ್ ಉಪಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಉದ್ಘಾಟನೆಯಾದ ದಿನಾಂಕ ಯಾವುದು ?
» 2013 ಜುಲೈ 25
» 2014  ಜುಲೈ 25
» 2015 ಜುಲೈ 25 
» 2016 ಜುಲೈ 25
ಉತ್ತರ : 2015 ಜುಲೈ 25

ದೀನದಯಾಳ್ ಉಪಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆಯು ಯಾವ ಸರ್ಕಾರದ ಕಾರ್ಯಕ್ರಮವಾಗಿದೆ ?
» ಕೇಂದ್ರ ಸರ್ಕಾರ  
» ರಾಜ್ಯ ಸರ್ಕಾರ
» ನಗರ ಪಾಲಿಕೆ
» ಜಿಲ್ಲಾ ಪಂಚಾಯಿತಿ
ಉತ್ತರ : ಕೇಂದ್ರ ಸರ್ಕಾರ

ಸ್ವಚ್ಛ ಭಾರತ ಯೋಜನೆಯನ್ನು ಈ ಕೆಳಗಿನ ಯಾವ ದಿನಾಂಕದಂದು ಉದ್ಘಾಟಿಸಲಾಯಿತು ?
» 2014 ರ ಅಕ್ಟೋಬರ್ 2 
» 2015 ರ ಅಕ್ಟೋಬರ್ 2
» 2013 ರ ಅಕ್ಟೋಬರ್ 2
» 2016 ರ ಅಕ್ಟೋಬರ್ 2
ಉತ್ತರ : 2014 ರ ಅಕ್ಟೋಬರ್ 2

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಈ ಕೆಳಗಿನ ಯಾವ ಪ್ರಾಯೋಜಿತ  ಕಾರ್ಯಕ್ರಮವಾಗಿದೆ ?
» ಕೇಂದ್ರ ಸರ್ಕಾರ 
» ರಾಜ್ಯ ಸರ್ಕಾರ
» ವಿಶ್ವಬ್ಯಾಂಕ್
» ಸ್ಥಳೀಯ ಸರ್ಕಾರ
ಉತ್ತರ : ಕೇಂದ್ರ ಸರ್ಕಾರ

ರಾಜೀವ್ ಗಾಂಧಿ ಯುವ ಚೈತನ್ಯ ಯೋಜನೆಯು ಆರಂಭವಾದ ವರ್ಷ ಯಾವುದು ?
» 2012-13
» 2013-14
» 2014-15
» 2015-16
ಉತ್ತರ : 2013-14

ಕೇಂದ್ರ ಹಣಕಾಸು ಆಯೋಗವನ್ನು ಯಾರು ನೇಮಿಸುತ್ತಾರೆ ?
» ರಾಷ್ಟ್ರಪತಿ 
» ಪ್ರಧಾನಮಂತ್ರಿ
» ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು
» ರಾಜ್ಯಪಾಲರು
ಉತ್ತರ : ರಾಷ್ಟ್ರಪತಿ

ಗ್ರಾಮೀಣ ವಿಕಾಸ ಯೋಜನೆಯು ಎಷ್ಟು ವರ್ಷದ ಯೋಜನೆಯಾಗಿದೆ ?
» ಒಂದು ವರ್ಷ
» ಎರಡು ವರ್ಷ
» ಮೂರು ವರ್ಷ 
» ಐದು ವರ್ಷ
ಉತ್ತರ : ಮೂರು ವರ್ಷ

ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶವು ಈ ಕೆಳಗಿನ ಯಾವ ಇಲಾಖೆಗೆ ಸಂಬಂಧಿಸಿದೆ ?
» ಪಂಚಾಯತ್ ರಾಜ್ ಇಲಾಖೆ
» ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 
» ನಗರಾಭಿವೃದ್ಧಿ ಮತ್ತು ಸ್ಥಳೀಯ ಪ್ರಾಧಿಕಾರ
» ಮೇಲಿನ ಯಾವುದೂ ಅಲ್ಲ
ಉತ್ತರ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಬಾಪೂಜಿ ಸೇವಾ ಕೇಂದ್ರಗಳನ್ನು ಈ ಕೆಳಗಿನ ಯಾವ ದಿನಾಂಕದಂದು ಪ್ರಾರಂಭಿಸಲಾಯಿತು ?
» 2014 ಜುಲೈ 1 
» 2015 ಜುಲೈ 1
» 2019 ಜುಲೈ 1
» 2010 ಜುಲೈ  1
ಉತ್ತರ : 2014 ಜುಲೈ 1

ಗಾಂಧಿ ಗ್ರಾಮ ಪುರಸ್ಕಾರವನ್ನು ಪ್ರಧಾನ ಮಾಡುವವರು ಯಾರು ?
» ಪ್ರಧಾನಮಂತ್ರಿಗಳು
» ಮುಖ್ಯಮಂತ್ರಿಗಳು
» ಪಿ.ಡಿ.ಓ
» ಗೃಹ ಮಂತ್ರಿಗಳು
ಉತ್ತರ : ಮುಖ್ಯಮಂತ್ರಿಗಳು