header ads

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು । Karnataka ratna award winners in kannada

 ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು 

  ಕರ್ನಾಟಕ ರತ್ನ ಎಂಬುದು ನಾಗರಿಕ ಪ್ರಶಸ್ತಿಯಾಗಿದ್ದು,ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಕೊಡಲಾಗುತ್ತದೆ.ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ನೀಡುತ್ತದೆ.ಇದೊಂದು ಸಾರ್ವಜನಿಕ ವರ್ಗದ ಪ್ರಶಸ್ತಿಯಾಗಿದೆ.ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿದ್ದು 1992ರಲ್ಲಿ.ಮೊದಲ ಬಾರಿಗೆ ಕುವೆಂಪು ಅವರಿಗೆ ಮತ್ತು ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರಿಗೆ ನೀಡಲಾಯಿತು.ಈ ಪ್ರಶಸ್ತಿಯನ್ನು ಇದುವರೆಗೆ ಮಹತ್ತರ ಸಾಧನೆ ಮಾಡಿದ 10 ಜನ ಗಣ್ಯ ವ್ಯಕ್ತಿಗಳಿಗೆ ನೀಡಲಾಗಿದೆ.

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಈ ಕೆಳಗಿನಂತಿವೆ.


ಕ್ರ.ಸಂ.

ಹೆಸರು

ಗೌರವಿಸಿದ್ದು

ಕ್ಷೇತ್ರ

1

ಕುವೆಂಪು

1992

ಸಾಹಿತ್ಯ

2

ಡಾ.ರಾಜ್ ಕುಮಾರ್

1992

ಸಿನೆಮಾ

3

ಎಸ್‌.ನಿಜಲಿಂಗಪ್ಪ

1999

ರಾಜಕೀಯ

4

ಸಿ.ಎನ್.ಆರ್.ರಾವ್

2000

ವಿಜ್ಞಾನ

5

ದೇವಿ ಪ್ರಸಾದ್‌ ಶೆಟ್ಟಿ

2001

ವೈದ್ಯಕೀಯ

6

ಭೀಮಸೇನ್‌ ಜೋಷಿ

2005

ಸಂಗೀತ

7

ಶ್ರೀ ಶಿವಕುಮಾರ ಸ್ವಾಮಿಗಳು

2007

ಸಾಮಾಜಿಕ ಸೇವೆ

8

ಡಾ.ಡಿ.ಜವರೇಗೌಡ

2008

ಶಿಕ್ಷಣ ಮತ್ತು ಸಾಹಿತ್ಯ

9

ಡಾ.ವೀರೇಂದ್ರ ಹೆಗ್ಗಡೆ

2009

ಸಾಮಾಜಿಕ ಸೇವೆ

10

ಪುನೀತ್‌ ರಾಜ್‌ಕುಮಾರ್

2021

ಸಿನೆಮಾ,ಸಾಮಾಜಿಕ ಸೇವೆ