header ads

ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ । bagalakote district court requirement

 ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 

   ಬಾಗಲಕೋಟೆ ಜಿಲ್ಲೆಯಲ್ಲಿನ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಯ ಹೆಸರು ಮತ್ತು ಸಂಖ್ಯೆ 

ಶೀಘ್ರಲಿಪಿಗಾರರು ಗ್ರೇಡ್ 3 

  ಒಟ್ಟು ಹುದ್ದೆಗಳು - 13

ಬೆರಳಚ್ಚುಗಾರರು

  ಒಟ್ಟು ಹುದ್ದೆಗಳು - 02

ಬೆರಳಚ್ಚು ನಕಲುಗಾರರು

  ಒಟ್ಟು ಹುದ್ದೆಗಳು - 01

ಆದೇಶ ಜಾರಿಕಾರರು

 ಒಟ್ಟು ಹುದ್ದೆಗಳು - 01

ಸಿಪಾಯಿ 

 ಒಟ್ಟು ಹುದ್ದೆಗಳು - 37


ವಿದ್ಯಾರ್ಹತೆ 

ಶೀಘ್ರಲಿಪಿಕಾರ ಗ್ರೇಡ್ - 3 ಮತ್ತು ಬೆರಳಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತಾಂತ್ರಿಕ ಶಿಕ್ಷಣ ಮಂಡಳಿಯ ಕಮರ್ಷಿಯಲ್ ಪ್ರಾಕ್ಟೀಸ್ 3 ವರ್ಷಗಳ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲಾದ ಹಿರಿಯ ಕನ್ನಡ ಮತ್ತು ಆಂಗ್ಲ  ಶೀಘ್ರಲಿಪಿ ಹಾಗೂ ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ  ಮೂರು ವರ್ಷಗಳ ಡಿಪ್ಲೊಮಾ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಬೆರಳಚ್ಚು - ನಕಲುಗಾರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು.ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.ಕರ್ನಾಟಕ ಫ್ರೌಡಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಆದೇಶ ಜಾರಿಕಾರ ಮತ್ತು ಸಿಪಾಯಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ ಹತ್ತನೇ ತರಗತಿಯಲ್ಲಿ ಪಾಸಾಗಿರಬೇಕು ಮತ್ತು ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.


ವಯೋಮಿತಿ

ಕನಿಷ್ಠ 18 ವರ್ಷಗಳು 

ಗರಿಷ್ಠ ವಯೋಮಿತಿ ನೋಡುವುದಾದರೆ,

ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷಗಳು.ಪ್ರವರ್ಗ 2ಎ,2ಬಿ,3ಎ,3ಬಿ ಗೆ ಸೇರಿದ ಅಭ್ಯರ್ಥಿಗಳ ಗರಿಷ್ಠ ವಯಸ್ಸು 38 ಮೀರಿರಬಾರದು.ಹಾಗೂ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು.ಮಾಜಿ ಸೈನಿಕರಿಗೆ,ಸರ್ಕಾರಿ ಸೇವೆಯಲ್ಲಿರುವವರಿಗೆ ಮತ್ತು ಅಂಗವಿಕಲರಿಗೆ ನಿಯಮಾನುಸಾರ ವಯೋಮಾನದ ಸಡಿಲಿಕೆ ಇದೆ.


ಅರ್ಜಿ ಶುಲ್ಕ 

ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 300 ರೂ.ಗಳು.ಪ್ರವರ್ಗ 2ಎ,2ಬಿ,3ಎ,3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ 150 ರೂ.ಗಳು.ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯತಿ ಇರುತ್ತದೆ.


ಮಾಸಿಕ ವೇತನ

ಶೀಘ್ರಲಿಪಿಗಾರರು ಗ್ರೇಡ್ 3 ಹುದ್ದೆಗೆ 27,650 ರೂ.ಗಳಿಂದ 52,650 ರೂ.ಗಳು.

ಬೆರಳಚ್ಚುಗಾರರು ಹುದ್ದೆಗೆ 21,400 ರೂ.ಗಳಿಂದ 42,000 ರೂ.ಗಳು.

ಬೆರಳಚ್ಚು ನಕಲುಗಾರರು ಹುದ್ದೆಗೆ 21,400 ರೂ.ಗಳಿಂದ 42,000 ರೂ.ಗಳು.

ಆದೇಶ ಜಾರಿಕಾರರು ಹುದ್ದೆಗೆ ರೂ.19,950 ಗಳಿಂದ 37,900ರೂ.ಗಳು.

ಸಿಪಾಯಿ ಹುದ್ದೆಗೆ 17,000ರೂ.ಗಳಿಂದ 28,950ರೂ.ಗಳು.


ಆಯ್ಕೆ ವಿಧಾನ 

ಪರೀಕ್ಷೆ ಮತ್ತು ಸಂದರ್ಶನದ ಮುಖಾಂತರ ಆಯ್ಕೆ ನಡೆಸಲಾಗುತ್ತದೆ.


ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು  ಪ್ರಾರಂಭ ದಿನಾಂಕ 21-03-2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-04-2022

ಶುಲ್ಕ ಪಾವತಿಸಲು ಕೊನೆಯ ದಿನಾಂಕ 22-04-2022


Notification Download