header ads

ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆಗಳು

 ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆಗಳು 

ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಅಂಗಸಂಸ್ಥೆಗಳ ಪ್ರಧಾನ ಪಾತ್ರ ವಹಿಸುತ್ತದೆ.ಇದರಿಂದಾಗಿ ವಿಶ್ವಸಂಸ್ಥೆಯು ವಿಶೇಷ ಅಂಗಸಂಸ್ಥೆಗಳನ್ನು ಸ್ಥಾಪನೆ ಮಾಡಿತು.ಅವುಗಳು ಈ ಕೆಳಗಿನಂತಿವೆ.

🔸ಡಬ್ಲೂ.ಎಚ್.ಒ ( W.H.O ) 

🔸ಯುನಿಸೆಫ್ ( UNICEF )

🔸ಎಫ್.ಎ.ಒ ( F.A.O )

🔸ಡಬ್ಲೂ.ಟಿ.ಒ ( WTO )

🔸ಐ.ಬಿ.ಆರ್.ಡಿ ( IBRD )

🔸ಐ.ಸಿ.ಎ.ಒ ( ICAO )

🔸ಐ.ಎ.ಡಿ ( IAD )

🔸ಯು.ಎನ್.ಸಿ.ಟಿ.ಎ.ಡಿ (UNCTAD )

🔸ಐ.ಎ.ಇ.ಎ  (IAEA )

🔸ಡಬ್ಲೂ.ಎಫ್.ಪಿ ( WFP )

🔸ಯು.ಎನ್.ಡಬ್ಲೂ.ಟಿ.ಒ  ( UNWTO ) 

🔸ಡಬ್ಲೂ.ಎಂ.ಒ  (  WMO )

🔸ಡಬ್ಲೂ.ಐ.ಪಿ.ಒ ( WIPO ) 

🔸ಯು.ಪಿ.ಯು  ( UPU )

🔸ಯು.ಎನ್.ಐ.ಡಿ.ಒ  ( UNIDO )

🔸ಡಬ್ಲೂ.ಬಿ ( WB )

🔸ಐ.ಟಿ.ಯು  ( ITU )

🔸ಐ.ಎಂ.ಒ  ( IMO ) 

🔸ಐ.ಎಫ್.ಎ.ಡಿ  ( IFAD )

🔸ಯುನೆಸ್ಕೋ ( UNESCO )

🔸ಐ.ಎಮ್.ಎಫ್  ( IMF ) 

🔸ಐ.ಎಲ್.ಒ  ( ILO )


🔸ಡಬ್ಲೂ.ಎಚ್.ಒ ( WHO )

     ವಿಶ್ವ ಆರೋಗ್ಯ ಸಂಸ್ಥೆ

     World Health Organization )

     ಸ್ಥಾಪನೆ : ಏಪ್ರಿಲ್ 7,1948

     ಕೇಂದ್ರ ಕಛೇರಿ : ಸ್ವಿಟ್ಜರ್ಲ್ಯಾಂಡ್ ನ ಜಿನಿವಾ

    ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವನ್ನಾಗಿ ಪ್ರತಿ ವರ್ಷ ವಿಶ್ವಸಂಸ್ಥೆಯು ಆಚರಿಸುತ್ತದೆ.

🔸 ಯುನಿಸೆಫ್  ( UNICEF )

 ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ ( United Nation International Children Emergency Fund )

       ಸ್ಥಾಪನೆ : ಡಿಸೆಂಬರ್ 1946

       ಕೇಂದ್ರ ಕಛೇರಿ : ನ್ಯೂಯಾರ್ಕ್ 

       1965 ರಲ್ಲಿ ಯುನಿಸೆಫ್ ಗೆ ನೊಬೆಲ್ ಶಾಂತಿ ಪ್ರಶಸ್ತಿ  

        ದೊರಕಿದೆ.

🔸 ಎಫ್.ಎ.ಒ ( FAO )

       ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ 

       ( Food and Agriculture Organization )

       ಸ್ಥಾಪನೆ : ಅಕ್ಟೋಬರ್ 16,1945

       ಕೇಂದ್ರ ಕಛೇರಿ : ಇಟಲಿಯ ರೋಮ್

🔸 ಡಬ್ಲೂ.ಟಿ.ಒ ( WTO )

      ವಿಶ್ವ ವ್ಯಾಪಾರ ಸಂಸ್ಥೆ

      ಕೇಂದ್ರ ಕಛೇರಿ : ಸ್ವಿಟ್ಜರ್ಲ್ಯಾಂಡ್ ನ ಜಿನಿವಾ

      ಸ್ಥಾಪನೆ : ಜ.1,1995

      ಅಧಿಕೃತ ಭಾಷೆ : ಇಂಗ್ಲೀಷ್,ಪ್ರೆಂಚ್,ಸ್ಪಾನಿಷ್ 

🔸 ಐ.ಬಿ.ಆರ್.ಡಿ ( IBRD )

      ಅಂತಾರಾಷ್ಟ್ರೀಯ ಪುನರ್ ರಚನೆ ಮತ್ತು ಅಭಿವೃದ್ಧಿ ಬ್ಯಾಂಕ್ 

      ಸ್ಥಾಪನೆ : ಜೂನ್ 25,1946

      ಕೇಂದ್ರ ಕಛೇರಿ : ವಾಷಿಂಗ್‌ಟನ್ ಡಿ.ಸಿ

      ಇದು ವಿಶ್ವ ಬ್ಯಾಂಕಿನ ಒಂದು ಭಾಗವಾಗಿದ್ದು,ಇದನ್ನು ವಿಶ್ವ ಬ್ಯಾಂಕ್ ಎಂದೇ ಕರೆಯಲಾಗುತ್ತದೆ.

🔸ಐ.ಸಿ.ಎ.ಒ ( ICAO )

     ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ

     ( International Civil Aviation Organization )

     ಸ್ಥಾಪನೆ : ಏಪ್ರಿಲ್ 1947

     ಕೇಂದ್ರ ಕಛೇರಿ : ಕೆನಡಾದ ಮಾಂಟ್ರಿಯಲ್ 

     ವಾಯು ಸಾರಿಗೆಯ ಅಂತಾರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸುತ್ತದೆ .

🔸ಐ.ಎ.ಡಿ ( IAD )

    ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಘಟನೆ 

    ( International Development Association )

    ಸ್ಥಾಪನೆ : ಸೆಪ್ಟೆಂಬರ್ 24,1960

    ಕೇಂದ್ರ ಕಛೇರಿ : ವಾಷಿಂಗ್‌ಟನ್ ಡಿ.ಸಿ

    ಇದು ವಿಶ್ವ ಬ್ಯಾಂಕಿನ ಒಂದು ಭಾಗವಾಗಿದೆ.ಇದು ಜಗತ್ತಿನ ಕಡು ಬಡತನದಲ್ಲಿರುವ ರಾಷ್ಟ್ರಗಳಿಗೆ ಪ್ರಾಥಮಿಕ ಶಿಕ್ಷಣ,ಆರೋಗ್ಯ,ಪರಿಸರ ಸಂರಕ್ಷಣೆ,ಕುಡಿಯುವ ನೀರು ಮತ್ತು ನೈರ್ಮಲ್ಯ ಕ್ಕಾಗಿ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತದೆ.

🔸ಯು.ಎನ್.ಸಿ.ಟಿ.ಎ.ಡಿ (UNCTAD )

    ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ 

    ( United Nations Conference on Trade and Development )

    ಕೇಂದ್ರ ಕಛೇರಿ : ಜಿನಿವಾ

    ಸ್ಥಾಪನೆ : 1964

    ಈ ಸಂಸ್ಥೆಯು ಅಂತಾರಾಷ್ಟ್ರೀಯ ವಾಣಿಜ್ಯ ವ್ಯಾಪಾರವನ್ನು ಉತ್ತೇಜಿಸುತ್ತದೆ.ಅಭಿವೃದ್ಧಿಶೀಲ ರಾಷ್ಟ್ರಗಳ  ಆರ್ಥಿಕತೆಯ ವಿಕಾಸವನ್ನು ಹೆಚ್ಚಿಸುತ್ತದೆ.

🔸ಐ.ಎ.ಇ.ಎ  (IAEA )

     ಅಂತಾರಾಷ್ಟ್ರೀಯ ಅಣುಶಕ್ತಿ ಒಕ್ಕೂಟ 

     ( International Atomic Energy Agency )

     ಸ್ಥಾಪನೆ : 1957

     ಕೇಂದ್ರ ಕಛೇರಿ : ಆಸ್ಟ್ರಿಯಾದ ವಿಯೆನ್ನಾ 

     ಪರಮಾಣು ಶಕ್ತಿಯನ್ನು ಶಾಂತಿ ಉದ್ದೇಶಕ್ಕೆ ಬಳಸಲು ಉತ್ತೇಜಿಸುವಂತಹ ಸಂಸ್ಥೆಯಾಗಿದೆ.

🔸ಡಬ್ಲೂ.ಎಫ್.ಪಿ ( WFP )

     ವಿಶ್ವ ಆಹಾರ ಕಾರ್ಯಕ್ರಮ 

     ಸ್ಥಾಪನೆ : 1960

     ಕೇಂದ್ರ ಕಛೇರಿ : ನ್ಯೂಯಾರ್ಕ್ 

     ವಿಶ್ವ ಆರೋಗ್ಯ ಮತ್ತು ಕೃಷಿ ಸಂಘಟನೆ 1960 ರಲ್ಲಿ ಏರ್ಪಡಿಸಿದ ಸಮ್ಮೇಳನದಲ್ಲಿ ಈ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು.

🔸ಯು.ಎನ್.ಡಬ್ಲೂ.ಟಿ.ಒ  ( UNWTO ) 

     ವಿಶ್ವಸಂಸ್ಥೆಯ ವಿಶ್ವ ಪ್ರವಾಸಿ ಸಂಸ್ಥೆ

      ( World Tourism Organization ) 

      ಸ್ಥಾಪನೆ : 1974

      ಕೇಂದ್ರ ಕಛೇರಿ : ಸ್ಪೇನ್ ನ ಮಡ್ರಿಡ್

      ಈ ಸಂಸ್ಥೆಯು ಜಾಗತಿಕವಾಗಿ ಪ್ರವಾಸಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ ಮತ್ತು ರೂಪುರೇಷೆಗಳನ್ನು ಸಿದ್ಧಪಡಿಸುತ್ತದೆ.

🔸ಡಬ್ಲೂ.ಎಂ.ಒ  (  WMO )

     ವಿಶ್ವ ಹವಾಮಾನ ಸಂಘಟನೆ 

     ( World Meteorological Organization )

     ಸ್ಥಾಪನೆ : 1950

     ಕೇಂದ್ರ ಕಛೇರಿ : ಸ್ವಿಟ್ಜರ್ಲ್ಯಾಂಡ್ ನ ಜಿನಿವಾದಲ್ಲಿದೆ.

🔸ಡಬ್ಲೂ.ಐ.ಪಿ.ಒ ( WIPO ) 

     ವಿಶ್ವ ಬೌದ್ಧಿಕ ಸಂಪತ್ತಿನ ಸಂಘಟನೆ 

     ( World Intellectual Property Organization )

     ಕೇಂದ್ರ ಕಛೇರಿ : ಜಿನಿವಾ

     ಸ್ಥಾಪನೆ : ಇದು 1967 ರಲ್ಲೇ ಸ್ಥಾಪನೆಯಾಗಿತ್ತು ಮತ್ತು 1974ರಲ್ಲಿ ಇದು ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆಯಾಗಿ ರೂಪುಗೊಂಡಿತು.

🔸ಯು.ಪಿ.ಯು  ( UPU )

      ಸಾರ್ವತ್ರಿಕ ಅಂಚೆ ಒಕ್ಕೂಟ

      ( Universal Post Union ) 

      ಕೇಂದ್ರ ಕಛೇರಿ : ಸ್ವಿಟ್ಜರ್ಲ್ಯಾಂಡ್ ನ ಬರ್ನೆ

      ಸ್ಥಾಪನೆ : ಈ ಸಂಸ್ಥೆಯು ಬರ್ನೆ ಒಪ್ಪಂದದ ಅನ್ವಯ 1874 ರಲ್ಲಿ ಸ್ಥಾಪನೆಯಾಗಿ,1947 ರಲ್ಲಿ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆಯಾಗಿ ರೂಪುಗೊಂಡಿತು.

🔸ಯು.ಎನ್.ಐ.ಡಿ.ಒ  ( UNIDO )

      ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಘಟನೆ 

      ( United Nations Industrial Development Organization )

      ಸ್ಥಾಪನೆ : 1967 ರಲ್ಲಿ ಸ್ಥಾಪನೆಯಾಗಿ,1985 ರಲ್ಲಿ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆಯಾಗಿ ಸೇರ್ಪಡೆಯಾಯಿತು.

🔸ಡಬ್ಲೂ.ಬಿ ( WB )

     ವಿಶ್ವ ಬ್ಯಾಂಕ್ 

     ( World Bank )

     ಸ್ಥಾಪನೆ : ಡಿಸೆಂಬರ್ 27,1945

     ಕೇಂದ್ರ ಕಛೇರಿ : ವಾಷಿಂಗ್‌ಟನ್ ಡಿ.ಸಿ

     ಜಾಗತಿಕ ಆರ್ಥಿಕ ವೃದ್ಧಿ ಮತ್ತು ಬಡತನವನ್ನು ಹೋಗಲಾಡಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಯಿತು.ವಿಶ್ವ ಬ್ಯಾಂಕ್ ಒಕ್ಕೂಟವು ಒಟ್ಟು ಐದು ಘಟಕಗಳನ್ನು ಹೊಂದಿದ್ದು,ಅವುಗಳಲ್ಲಿ IBRD ಮತ್ತು IADಗಳನ್ನು ಒಟ್ಟಾಗಿ ವಿಶ್ವ ಬ್ಯಾಂಕ್ ಎಂದು ಕರೆಯುತ್ತಾರೆ.

🔸ಐ.ಟಿ.ಯು  ( ITU )

     ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ

    ( International Telecommunication Union )

    ಸ್ಥಾಪನೆ : 1947

    ಕೇಂದ್ರ ಕಛೇರಿ : ಸ್ವಿಟ್ಜರ್ಲ್ಯಾಂಡ್ ನ ಜಿನಿವಾ

    ಮಾಹಿತಿ ಮತ್ತು ತಂತ್ರಜ್ಞಾನ ವಿಷಯಗಳನ್ನು ನಿಯಂತ್ರಿಸುವ ಕಾರ್ಯವನ್ನು ಮಾಡುತ್ತದೆ.

🔸ಐ.ಎಂ.ಒ  ( IMO ) 

    ಅಂತಾರಾಷ್ಟ್ರೀಯ ಸಾಗರಿಕ ಸಂಘಟನೆ 

    ( International Marilime Organization )

    ಸ್ಥಾಪನೆ : 1948

    ಕೇಂದ್ರ  ಕಛೇರಿ : ಲಂಡನ್ 

🔸ಐ.ಎಫ್.ಎ.ಡಿ  ( IFAD )

    ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ

    ( International Fund for Agricultural Development )

    ಸ್ಥಾಪನೆ : 1977

    ಕೇಂದ್ರ  ಕಛೇರಿ : ಇಟಲಿಯ ರೋಮ್

    ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಗ್ರಾಮೀಣ ಬಡತನವನ್ನು ನಿರ್ಮೂಲನೆ ಮಾಡುವುದಾಗಿದೆ.

🔸ಯುನೆಸ್ಕೋ ( UNESCO )

      ವಿಶ್ವಸಂಸ್ಥೆಯ ಶೈಕ್ಷಣಿಕ , ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ

      ( Unted Nations Educational,Scientific and Cultural Organization )

      ಸ್ಥಾಪನೆ : ನವೆಂಬರ್ 16,1945

      ಕೇಂದ್ರ  ಕಛೇರಿ : ಪ್ಯಾರಿಸ್ 

      ತನ್ನ ಸದಸ್ಯ ರಾಷ್ಟ್ರಗಳಲ್ಲಿ ಸಾಕ್ಷರತೆ ಮಟ್ಟವನ್ನು ಹೆಚ್ಚಿಸುವ ಮತ್ತು ವಿಜ್ಞಾನ,ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

🔸ಐ.ಎಮ್.ಎಫ್  ( IMF ) 

     ಅಂತಾರಾಷ್ಟ್ರೀಯ ಹಣಕಾಸು ನಿಧಿ

     ( International Monetary Fund )

     ಸ್ಥಾಪನೆ : 1945

     ಕೇಂದ್ರ  ಕಛೇರಿ : ವಾಷಿಂಗ್‌ಟನ್ ಡಿ.ಸಿ

     ಅಂತಾರಾಷ್ಟ್ರೀಯ ಆರ್ಥಿಕತೆಗೆ ತಲೆದೋರುವ ಸಮಸ್ಯೆಗಳ ಬಗೆಗೆ ಸಲಹೆ,ಸಹಕಾರವನ್ನು ನೀಡುತ್ತದೆ.

🔸ಐ.ಎಲ್.ಒ  ( ILO )

     ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ 

     ( International Labour Organization )

     ಸ್ಥಾಪನೆ : 1919

     ಇದು ಮೊದಲ ಮಹಾಯುದ್ಧದ ನಂತರ ಸ್ಥಾಪನೆಯಾದ ಲೀಗ್ ಆಫ್ ನೇಷನ್ಸ್ ಸಂದರ್ಭದಲ್ಲಿ ಸ್ಥಾಪನೆಯಾಗಿ ಮುಂದುವರೆಯಿತು.

     ಕೇಂದ್ರ ಕಛೇರಿ : ಸ್ವಿಟ್ಜರ್ಲ್ಯಾಂಡ್ ನ ಜಿನಿವಾ

     ಇದಕ್ಕೆ 1969ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ


ಇದಾಗಿತ್ತು ಈ ಬರಹದ ಚಿಕ್ಕ ಮಾಹಿತಿ.ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುವೆ.